ನಾಯಕ ವಿದ್ಯಾರ್ಥಿ ನಿಲಯ (ರಿ.)

ನಾಯಕ ವಿದ್ಯಾರ್ಥಿ ನಿಲಯ, ಪಿ.ಜೆ. ಬಡಾವಣೆ, ದಾವಣಗೆರೆ - 577002.

1 / 8
ನಾಯಕ ವಿದ್ಯಾರ್ಥಿ ನಿಲಯ (ರಿ.)
2 / 8
3 / 8
4 / 8
5 / 8
6 / 8
7 / 8
8 / 8


ಬೇಡರು ಕ್ಷತ್ರಿಯ ಮೂಲದವರೆಂದು ಸಮರ್ಥಿಸಿಕೊಳ್ಳುವ ಐತಿಹ್ಯ ಹೀಗಿದೆ : ಚಂದ್ರವಂಶದ ಕ್ಷತ್ರಿಯನಾದ ಕಾರ್ತವೀರ್ಯಾರ್ಜುನನು ಜಮದಗ್ನಿಯನ್ನು ಕೊಲ್ಲುತ್ತಾನೆ. ಇದರಿಂದ ಕುಪಿತನಾದ ಜಮದಗ್ನಿ ಪುತ್ರ ಪರಶುರಾಮನು ಕಾರ್ತಿವೀರ್ಯನನ್ನು ಕೊಂದನಲ್ಲದೆ ಅವನ ವಂಶವನ್ನು ಸರ್ವನಾಶ ಮಾಡಲು ಇಪ್ಪತ್ತೊಂದು ಭಾರಿ ದಂಡಯಾತ್ರೆ ನಡೆಸುತ್ತಾನೆ. ಇದರಿಂದ ಹೆದರಿದ ಕ್ಷತ್ರಿಯರೆಲ್ಲರು ಕಾಡುಗಳನ್ನು ಸೇರಿ ಬೇಡರಾದರು.




ರೇಣುಕೆ ಅಥವಾ ಎಲ್ಲಮ್ಮನ ಆರಾಧಕ ಪಂಗಡವಾದ ಬೇಡರಲ್ಲಿನ ಐತಿಹ್ಯದಂತೆ ಇವರು ಪರಶುರಾಮನ ಪರಂಪರೆಯವರು; ಎಲ್ಲಮ್ಮನ ಆರಾಧಕರಾದರು. ಗಂಧರ್ವನನ್ನು ನೋಡಿ ಯಲ್ಲಮ್ಮನು ಚಿತ್ತ ಚಂಚಲೆಯಾಗಿದ್ದಾಳೆಂದು ನಿರ್ಧರಿಸಿದ ಪತಿ ಜಮದಗ್ನಿಯು ಆಕೆಯನ್ನು ಕೊಲ್ಲುವಂತೆ ಮಗನಾದ ಪರಶುರಾಮನಿಗೆ ತಿಳಿಸುತ್ತಾನೆ. ಅಂತೆಯೇ ಪರಶುರಾಮನು ತನ್ನ ತಾಯಿಯ ತಲೆಯನ್ನು ಕತ್ತರಿಸುತ್ತಾನೆ.